ಚಿತ್ರರಂಗಕ್ಕೆ ರಾಹು ಗಂಡಾಂತರ! ಅಪಾಯದ ಮುನ್ಸೂಚನೆ ತಿಳಿಸಿ ಪರಿಹಾರವನ್ನೂ ಸೂಚಿಸಿದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ

ಚಿತ್ರರಂಗದಲ್ಲಿನ ಇತ್ತೀಚಿನ ಕೆಲ ಬೆಳವಣಿಗೆಗಳು ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಸಾವು ನೋವಿನ ಸುದ್ದಿಗಳೇ ಹೆಚ್ಚು ಕೇಳಿಬರುತ್ತಿವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಚಿತ್ರರಂಗದಲ್ಲಿನ ಗಂಡಾಂತರದ ಬಗ್ಗೆ ವಿವರಿಸಿದ್ದಾರೆ. ಅದಕ್ಕೆ ಸೂಕ್ತ ಪರಿಹಾರವನ್ನೂ ನೀಡಿದ್ದಾರೆ.  Source link

ರಾಹುಲ್ ಗಾಂಧಿ ಅವರದ್ದು ಈ ಸಲ ಅಮೇಠಿಯಿಂದಲೇ ಸ್ಪರ್ಧೆ ಎಂದ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥಅಜಯ್ ರಾಯ್‍

ರಾಹುಲ್ ಗಾಂಧಿ ಸ್ಪರ್ಧೆ ಈ ಸಲವೂ ವಯನಾಡ್‌ ಮತ್ತು ಅಮೇಥಿಯಿಂದ ರಾಹುಲ್ ಗಾಂಧಿ 2019 ರಲ್ಲಿ, ಅಮೇಥಿ ಮತ್ತು ವಯನಾಡ್ ಎರಡರಿಂದಲೂ ಸ್ಪರ್ಧಿಸಿದ್ದರು. ಅಮೇಥಿ ಅವರ ಪರಂಪರೆಯ ಸ್ಥಾನವಾಗಿದ್ದರೆ, ವಯನಾಡ್ ದಕ್ಷಿಣಕ್ಕೆ ಅವರ ಮೊದಲ ಪ್ರವೇಶವಾಗಿತ್ತು. ಅಮೇಥಿಯಲ್ಲಿ ರಾಹುಲ್ ಗಾಂಧಿಯನ್ನು ಸೋಲಿಸಿದ ನಂತರ ಸ್ಮೃತಿ ಇರಾನಿ ಗೆಲುವಿನ ಶಕ್ತಿಯಾಗಿ ಅಲ್ಲಿ ಹೊರಹೊಮ್ಮಿದರು. ರಾಹುಲ್ ಗಾಂಧಿ ಅವರು ವಯನಾಡಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. Source link

Kannada Panchanga: ನಿತ್ಯ ಪಂಚಾಂಗ; ಆಗಸ್ಟ್ 19ರ ದಿನ ವಿಶೇಷ, ಇತರ ಅತ್ಯಗತ್ಯ ಧಾರ್ಮಿಕ ವಿವರ ಇಲ್ಲಿದೆ

Todays Panchaga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಆಗಸ್ಟ್ 19ರ ನಿತ್ಯ ಪಂಚಾಂಗ, ದಿನವಿಶೇಷ ಮತ್ತು ಇತರೆ ವಿವರ ಹೀಗಿದೆ. Source link

ಬೆಡ್ ಮೇಲೆ ಅವಿತಿರುವ ನಾಯಿ ನಿಮ್ಮ ಕಣ್ಣಿಗೆ ಕಾಣಿಸ್ತಾ; ನಿಮಿಷದೊಳಗೆ

ಈ ಚಿತ್ರದಲ್ಲಿ ಕಾಣುವ ಹಾಸಿಗೆಯ ಮೇಲೆ ಬೆಡ್‌ಶೀಟ್‌ ಅಷ್ಟೇ ಅಷ್ಟೇ ನಿಮ್ಮ ಕಣ್ಣಿಗೆ ಕಾಣುತ್ತಿರಬಹುದು. ಆದರೆ, ಈ ಬೆಡ್‌ ಮೇಲೆ ನಾಯಿಯೊಂದು ಅಡಗಿದೆ. ಆ ನಾಯಿ ಎಲ್ಲಿದೆ ಎಂಬುದನ್ನು ನೀವು ಕಂಡುಹಿಡಿದರೆ ನಿಮ್ಮ ದೃಷ್ಟಿ ಸೂಕ್ಷ್ಮವಾಗಿದೆ ಎಂದರ್ಥ. ಒಂದು ವೇಳೆ ನಿಮ್ಮ ಕಣ್ಣಿಗೆ ನಾಯಿ ಬಿದ್ದರೆ, ಅದನ್ನು ಹುಡುಕಲು ಎಚ್ಟು ಸಮಯ ತೆಗೆದುಕೊಂಡಿದ್ದೀರಿ ಎಂಬುದನ್ನು ನೀವೇ ಲೆಕ್ಕ ಹಾಕಿ. Source link

Kirik Keerthi: ಕರಿಮಣಿ ಮಾಲೀಕ ನಾನಲ್ಲ! ಪ್ರೀತಿಸಿ ಮದುವೆಯಾದ ಪತ್ನಿ ಅರ್ಪಿತಾಗೆ ಡಿವೋರ್ಸ್‌ ನೀಡಿದ ಕಿರಿಕ್‌ ಕೀರ್ತಿ

ಪತ್ರಕರ್ತ, ನಿರೂಪಕ, ಬಿಗ್‌ ಬಾಸ್‌ ಖ್ಯಾತಿಯ ಕಿರಿಕ್‌ ಕೀರ್ತಿ ಮತ್ತು ಅರ್ಪಿತಾ ಜೋಡಿಯ ದಾಂಪತ್ಯ ಅಂತ್ಯವಾಗಿದೆ. ಇನ್ಮೇಲೆ ಕರಿಮಣಿ ಮಾಲೀಕ ನಾನಲ್ಲ ಎಂದು ಕೀರ್ತಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.  Source link

ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಎಷ್ಟಿದೆ, ಬೆಳ್ಳಿ ಬೆಲೆ ಏರಿತಾ; ಮಂಗಳೂರು, ಮೈಸೂರಲ್ಲಿ ಹೇಗಿದೆ ಇಲ್ಲಿದೆ ವಿವರ

ಚಿನ್ನ ಮತ್ತು ಬೆಳ್ಳಿಯ ದರ ದೇಶದಲ್ಲಿ ಇಂದಿನ ವಹಿವಾಟಿನ ಕೊನೆಗೆ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಸ್ಥಿರವಾಗಿದ್ದು 54,100 ರೂಪಾಯಿ ಆಗಿದೆ. 24 ಕ್ಯಾರೆಟ್‌ ಅಪರಂಜಿ ಚಿನ್ನದ ದರ 10 ಗ್ರಾಂಗೆ 59,020 ರೂಪಾಯಿ ಆಗಿದೆ. ಆದರೆ, ಬೆಳ್ಳಿಯ ದರ ಏರಿಕೆಯಾಗಿದ್ದು, ಒಂದು ಕಿಲೋ ಮೇಲೆ 1,000 ರೂಪಾಯಿ ಏರಿ 73,500 ರೂಪಾಯಿ ಆಗಿದೆ. Source link

ಪ್ರಯೋಜನವಿಲ್ಲದ ಓಡಾಟ, ಹೆಚ್ಚಿನ ಖರ್ಚು, ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ; ಶನಿವಾರದ ರಾಶಿಫಲ

ಶನಿವಾರದ ರಾಶಿ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ‘ದಿನ ಭವಿಷ್ಯ’ ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ … Read more

Joint pain: ಕೀಲು ನೋವಿಗೆ ಪರಿಹಾರ ಹುಡುಕುತ್ತಿದ್ದೀರಾ, ಈ 5 ಸರಳ ವ್ಯಾಯಾಮಗಳ ಮೂಲಕ ಸಂಧಿವಾತ ಸಮಸ್ಯೆಗೆ ಪರಿಹಾರ ಪಡೆಯಿರಿ

Joint pain exercises: ಸಂಧಿವಾತದ ಪರಿಣಾಮವಾಗಿ ಕೀಲುನೋವು, ಮಂಡಿನೋವು ಇತ್ಯಾದಿ ನೋವಿನ ಸಮಸ್ಯೆಯನ್ನು ಸಾಕಷ್ಟು ಜನರು ಅನುಭವಿಸುತ್ತಾರೆ. ಸರಳ ವ್ಯಾಯಾಮಗಳ ಮೂಲಕ ಈ ಕೀಲು ನೋವಿಗೆ ಪರಿಹಾರ ಕಂಡುಕೊಳ್ಳಬಹುದು. Source link

ಪೃಥ್ವಿರಾಜ್‌ ಸುಕುಮಾರನ್‌ ಜತೆ ಶಿವಣ್ಣನ ಮಲಯಾಳಂ ಸಿನಿಮಾ; ಟೈಸನ್‌ ಅಥವಾ ಎಂಪುರಾನ್‌?

ಕೆಲ ದಿನಗಳ ಹಿಂದಷ್ಟೇ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣನಿಗೆ, ನೀವು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಚಿತ್ರ ಮಾಡುತ್ತಿದ್ದೀರಾ? ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅಷ್ಟೇ ನಯವಾಗಿ ಪ್ರತಿಕ್ರಿಯೆ ನೀಡಿದ್ದ ಶಿವರಾಜ್‌ಕುಮಾರ್‌, ಹೌದು ನಡೆಯುತ್ತಿದೆ ಎಂದಿದ್ದರು. “ನನಗೆ ಪೃಥ್ವಿರಾಜ್ ಎಂದರೆ ತುಂಬಾ ಇಷ್ಟ. ಆ ಚಿತ್ರದ ಹೆಸರು ನನಗೆ ಇನ್ನೂ ಗೊತ್ತಾಗಿಲ್ಲ, ಆದರೆ ಅದು ಖಂಡಿತವಾಗಿಯೂ ಆಗಲಿದೆ” ಎಂದು ಹೇಳಿದ್ದರು. Source link

UDGAM portal link: ನಿಮ್ಮ ದುಡ್ಡು ಬ್ಯಾಂಕ್‌ನವರ ಪಾಲಾಗದಿರಲಿ; ಹಣ ಇಟ್ಟು ಮರೆತವರಿಗೆಂದು ಪೋರ್ಟಲ್ ಆರಂಭಿಸಿದ RBI

UDGAM RBI portal link: ಬಹು ಬ್ಯಾಂಕುಗಳಲ್ಲಿರುವ ತಮ್ಮ ಕ್ಲೈಮ್ ಮಾಡದ ಠೇವಣಿಗಳನ್ನು ಒಂದೆ ವೇದಿಕೆಯಲ್ಲಿ ಸುಲಭವಾಗಿ ಪತ್ತೆಹಚ್ಚಲು, ಟ್ರ್ಯಾಕ್ ಮಾಡುವುದಕ್ಕೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಯುಡಿಜಿಎಎಂ ಪೋರ್ಟಲ್‍ ಅನ್ನು  ಭಾರತೀಯ ರಿಸರ್ವ್ ಬ್ಯಾಂಕ್ ಆರಂಭಿಸಿದೆ. Source link