



ದೇಶದಾದ್ಯಂತದ ವಿದ್ಯಾರ್ಥಿಗಳು ಪ್ರತಿ ವರ್ಷ ರಾಜಸ್ಥಾನದ ಕೋಟ ಪಟ್ಟಣಕ್ಕೆ ಬರುತ್ತಾರೆ, ಸುಮಾರು 2,25,000 ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪರೀಕ್ಷೆಗಾಗಿ ಇಕ್ಕಟ್ಟಾದ ಕ್ಲಾಸ್ ರೂಂಗಳಲ್ಲಿ ಅಧ್ಯಯನ ಮಾಡುತ್ತಾರೆ. 2018 ರಲ್ಲಿ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ನಡೆಸಿದ ಅಧ್ಯಯನವು ಪಟ್ಟಣದ ಹಲವಾರು ವಿದ್ಯಾರ್ಥಿಗಳು ಖಿನ್ನತೆ, ಅನಾರೋಗ್ಯ, ಆತಂಕ ಮತ್ತು ತರಬೇತಿಯ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ. ಸ್ವಯಂ-ಹಾನಿ, ಮಾದಕ ದ್ರವ್ಯ ಸೇವನೆ, ನಿಂದನೆ, ಬೆದರಿಸುವಿಕೆಯಂತಹ ಅತಿರೇಕದ ನಿದರ್ಶನಗಳನ್ನು ಸಹ ಈ ವರದಿ ಕಂಡುಹಿಡಿದಿದೆ.