



ಕೆಲ ದಿನಗಳ ಹಿಂದಷ್ಟೇ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದ ಶಿವಣ್ಣನಿಗೆ, ನೀವು ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರೊಂದಿಗೆ ಚಿತ್ರ ಮಾಡುತ್ತಿದ್ದೀರಾ? ಎಂಬ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅಷ್ಟೇ ನಯವಾಗಿ ಪ್ರತಿಕ್ರಿಯೆ ನೀಡಿದ್ದ ಶಿವರಾಜ್‌ಕುಮಾರ್, ಹೌದು ನಡೆಯುತ್ತಿದೆ ಎಂದಿದ್ದರು. “ನನಗೆ ಪೃಥ್ವಿರಾಜ್ ಎಂದರೆ ತುಂಬಾ ಇಷ್ಟ. ಆ ಚಿತ್ರದ ಹೆಸರು ನನಗೆ ಇನ್ನೂ ಗೊತ್ತಾಗಿಲ್ಲ, ಆದರೆ ಅದು ಖಂಡಿತವಾಗಿಯೂ ಆಗಲಿದೆ” ಎಂದು ಹೇಳಿದ್ದರು.