



ನಿದ್ರಿಸುತ್ತಿರುವಾಗ ಕನಸು ಕಾಣುವುದು ಸಾಮಾನ್ಯ. ಕೆಲವೊಂದು ಕನಸುಗಳನ್ನು ಕಂಡು ಖುಷಿಯಾದರೆ, ಇನ್ನೂ ಕೆಲವು ಕನಸುಗಳಿಂದ ಹಲವರು ಭಯಪಡುತ್ತಾರೆ. ಕನಸುಗಳು ನಿಜವಲ್ಲದಿದ್ದರೂ, ಸ್ವಪ್ನಶಾಸ್ತ್ರದ ಪ್ರಕಾರ ನಾವು ಕಾಣುವ ಕನಸುಗಳಿಗೂ ವಿಶೇಷ ಅರ್ಥವಿದೆ. ಹಲವರಿಗೆ ರಾತ್ರಿ ಕಂಡ ಕನಸು ಬೆಳಗ್ಗೆ ಎಚ್ಚರವಾದಾಗ ನೆನಪೇ ಇರುವುದಿಲ್ಲ. ಇನ್ನೂ ಕೆಲವರು ಏನೇ ಕನಸು ಕಂಡರೂ ಸಂಪೂರ್ಣವಾಗಿ ನೆನಪಿಟ್ಟುಕೊಳ್ಳುತ್ತಾರೆ. ಅಲ್ಲದೆ ಕನಸಿನಲ್ಲಿ ಕಂಡದ್ದೇ ನಿಜವಾದರೆ ಏನು ಮಾಡುವುದು ಎಂದು ಭಯಪಡುತ್ತಾರೆ. ಕಂಡ ಕನಸೇ ನಿಜವಾಗದಿದ್ದರೂ, ಕನಸಿನಲ್ಲಿ ಕಾಣುವ ಕೆಲವೊಂದು ವಸ್ಸು ಅಥವಾ ವಿಷಯಗಳಿಗೆ ಸ್ವಪ್ನಶಾಸ್ತ್ರದ ಪ್ರಕಾರ ವಿಶೇಷ ಅರ್ಥವಿದೆ. ಹೀಗಾಗಿ ಕನಸಿನಲ್ಲಿ ರೈಲು ಕಾಣುವುದರ ಹಿಂದಿರುವ ಅರ್ಥವನ್ನು ತಿಳಿಯೋಣ.